ವಿಪುಲ್ ರಾಯ್ ಇವರು ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಟ. ಎಸ್‌ಎಬಿ ಟಿವಿಯ ಎಫ್‌.ಐ.ಆರ್.‌ನಲ್ಲಿ ಭೋಲಾ ಪಂಡಿತ್ ಪಾತ್ರದಿಂದ ಪ್ರಸಿದ್ಧರಾಗಿದ್ದಾರೆ ಹಾಗೂ ಪಂಜಾಬಿ ಚಲನಚಿತ್ರವಾದ ವಾಟ್ ದಿ ಜಟ್!!‌ನಲ್ಲಿ ನಟಿಸಿದ್ದಾರೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ರಾಯ್ ತಮ್ಮ ಶಾಲಾ ಶಿಕ್ಷಣವನ್ನು ಶೆರ್ವುಡ್ ಕಾಲೇಜಿನಲ್ಲಿ ಮಾಡಿದರು. ಅವರು ತಮ್ಮ ಬಾಲ್ಯದಲ್ಲಿ ನಾಟಕದ ಸಂದರ್ಶನದ ಮೂಲಕ ಅಮಿತಾಬ್ ಬಚ್ಚನ್ ಅವರಿಂದ ನಟನೆಗಾಗಿ ತಮ್ಮ ಮೊದಲ ಪ್ರಶಸ್ತಿಯನ್ನು ಪಡೆದರು. ೨೦೦೪ ರಲ್ಲಿ ಭಾರತದ ಅತ್ಯುತ್ತಮ ಸಿನಿಸ್ಟಾರ್ಸ್ ಕಿ ಖೋಜ್‌ನ ಮೊದಲ ಸೀಸನ್‌‌ನಲ್ಲಿ ಭಾರತದಿಂದ ೩೨ ಫೈನಲಿಸ್ಟ್‌ಗಳಲ್ಲಿ ಆಯ್ಕೆಯಾದಾಗ ಅವರು ಊಟಿಯಲ್ಲಿ ಹೋಟೆಲ್ ನಿರ್ವಹಣೆಯನ್ನು ಮಾಡುತ್ತಿದ್ದರು. == ವೈಯಕ್ತಿಕ ಜೀವನ == ೨೦೧೯ ರಲ್ಲಿ, ರಾಯ್ ತಮ್ಮ ಗೆಳತಿಯಾದ ಮೆಲಿಸ್ ಅಟಿಸಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ನಂತರ, ಅವರು ಫೆಬ್ರವರಿ ೨೦, ೨೦೨೨ ರಂದು ವಿವಾಹವಾದರು. == ವೃತ್ತಿಜೀವನ == ವಿಪುಲ್ ರಾಯ್ ಇಂಡಿಯಾಸ್ ಬೆಸ್ಟ್ ಸಿನಿಸ್ಟಾರ್ಸ್ ಕಿ ಖೋಜ್‌ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. ನಂತರ, ಅವರು ಸ ರಿ ಗ ಮ ಪ ಮೆಗಾ ಚಾಲೆಂಜ್ ಅನ್ನು ಆಯೋಜಿಸಿದರು ಮತ್ತು ಹಾಡಿನ ಹಿನ್ನೆಯನ್ನು ಹೊಂದಿರದಿದ್ದ ಮೊದಲ ನಿರೂಪಕರಾದರು. ನಂತರ, ಅವರು ಮನೀಶ್ ಪಾಲ್‌ರವರೊಂದಿಗೆ ವ್ಹೀಲ್ ಘರ್ ಘರ್ ಮೇ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ತುಜ್ಕೊ ಹೈ ಸಲಾಮ್ ಜಿಂದಗಿ ಮತ್ತು ಚೆಹ್ರಾದಂತಹ ಕಾಲ್ಪನಿಕ ಪ್ರದರ್ಶನಗಳಲ್ಲಿ ಪಾತ್ರಗಳನ್ನು ಮುಂದುವರಿಸಿದರು. ೨೦೧೩ ರಲ್ಲಿ, ಅಮೀರ್ ಅಲಿಯವರು ಪ್ರದರ್ಶನವನ್ನು ತೊರೆದ ನಂತರ, ರಾಯ್ ಎಫ್.ಐ.ಆರ್ ಪ್ರದರ್ಶನದಲ್ಲಿ ಭೋಲಾ ಪಂಡಿತ್ ಪಾತ್ರವನ್ನು ನಿರ್ವಹಿಸಿದರು. ೨೦೧೪ ರಲ್ಲಿ, ಅವರು ಜೀನಿ ಔರ್ ಜುಜು ಪಾತ್ರವರ್ಗಕ್ಕೆ ಸೇರಿದರು. ೨೦೧೫ ರಲ್ಲಿ, ರಾಯ್ ಸಾಹಿಬ್ ಬಿವಿ ಔರ್ ಬಾಸ್ ಚಿತ್ರದಲ್ಲಿ ಸನ್ನಿ ಪಾತ್ರವನ್ನು ನಿರ್ವಹಿಸಿದರು. ೨೦೧೬ ರಲ್ಲಿ, ಅವರು ಡಾ.ಮಧುಮತಿ ಆನ್ ಡ್ಯೂಟಿ ಚಿತ್ರದಲ್ಲಿ ಡೆಬಿನಾ ಬ್ಯಾನರ್ಜಿ‌ಯವರ ಎದುರು ಮೋಹನ್ ಪಾತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದರು. ೨೦೧೭ ರಲ್ಲಿ, ಅವರು ಪಾರ್ಟ್ನರ್ಸ್ ಟ್ರಬಲ್ ಹೋ ಗಯಿ ಡಬಲ್ ಸರಣಿಯಲ್ಲಿ ಸರ್.ಇನ್ಸ್ಪೆಕ್ಟರ್ ಆದಿತ್ಯ ದೇವ್ ಪಾತ್ರದಲ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಮುಖ್ಯ ಪಾತ್ರವನ್ನು ನಿರ್ವಹಿಸಿದರು. ೨೦೧೯ ರಲ್ಲಿ, ಅವರು &ಟಿವಿಯ ನಯೀ ಶಾದಿ ಕೆ ಸಿಯಾಪೆಯಲ್ಲಿ ಬಂಟಿ ಪಾತ್ರದಲ್ಲಿ ಕಾಣಿಸಿಕೊಂಡರು. ಅವರು ಎಎಲ್‌ಟಿ ಬಾಲಾಜಿ ಅವರ ವೆಬ್ ಸರಣಿಯಾದ ಬೂ ಸಬ್ಕಿ ಫತೇಗಿಯಲ್ಲಿ ಶೆಫಾಲಿ ಜರಿವಾಲಾ ಅವರೊಂದಿಗೆ ವೀರ್ ಪಾತ್ರದಲ್ಲಿ ನಟಿಸಿದ್ದಾರೆ. == ಚಿತ್ರಕಥೆ == === ದೂರದರ್ಶನ === === ಚಲನಚಿತ್ರ === === ವೆಬ್ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಐಎಂಡಿಬಿಯಲ್ಲಿ ವಿಪುಲ್ ರಾಯ್ ಬಾಲಿವುಡ್ ಹಂಗಾಮಾದಲ್ಲಿ ವಿಪುಲ್ ರಾಯ್ ಇನ್ಸ್ಟಾಗ್ರಾಮ್‌ನಲ್ಲಿ ವಿಪುಲ್ ರಾಯ್